Pages

Showing posts with label Indu Enage Govinda. Show all posts
Showing posts with label Indu Enage Govinda. Show all posts

ಇಂದು ಎನಗೆ ಗೋವಿಂದ (Indu Enage Govinda)


ಇಂದು ಎನಗೆ ಗೋವಿಂದ 
ಶ್ರೀ ರಾಘವೇಂದ್ರ ಸ್ವಾಮಿ

Image Source: Google

ಇಂದು ಎನಗೆ ಗೋವಿಂದ ನಿನ್ನಯ
ಪಾದಾರವಿಂದವ ತೋರೋ ಮುಕುಂದನೆ ||

ಸುಂದರ ವದನನೆ ನಂದಗೋಪನ ಕಂದ
ಮಂದರೋದ್ಧಾರ ಆನಂದ ಇಂದಿರಾ ರಮಣ ||

ನೊಂದೆನಯ್ಯ ಭವಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು
ಕಂದನಂತೆ ಎಂದೆನ್ನ ಕು೦ದುಗಳೆಣಿಸದೆ
ತಂದೆ ಕಾಯೊ ಕೃಷ್ಣ ಕಂದರ್ಪಜನಕನೆ ||೧||

ಮೂಢತನದಿ ಬಹು ಹೇಡಿ ಜೀವ ನಾನಾಗಿ
ದೃಢಭಕುತಿಯನು ಮಾಡಲಿಲ್ಲವೊ ಹರಿಯೆ
ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ
ಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ ||೨||

ಧಾರುಣಿಯೊಳು ಭೂಭಾರಜೀವ ನಾನಾಗಿ
ದಾರಿತಪ್ಪಿ ನಡೆದೆ ಸೇರಿದೆ ಕುಜನರ
ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯ
ಧೀರವೇಣುಗೋಪಾಲ ಪಾರುಗಾಣಿಸೊ ಹರಿಯೆ ||೩||